ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

ಸಾಮಾಜಿಕ ಜಾಲಾ ತಾಣದಲ್ಲಿ ವೈರಲ್ ಆಗುತ್ತಿರುವ ಸತೀಶ್ ಆಚಾರ್ಯ ಅವರ “ಏಕ್ ಹೈ ತೊ ಸೈಫ್ ಹೈ”  ಅದ್ಭುತ ಕಾರ್ಟೂನ್

Sun, 24 Nov 2024 22:33:54  Office Staff   SOnews

ಭಟ್ಕಳ: ಹಿಂದೂ ಮತಗಳನ್ನು ಕ್ರೂಢಿಕರಿಸಲು ಉತ್ತರಪ್ರದೇಶದ ಸಿ.ಎಂ. ಯೋಗಿ ಆಧಿತ್ಯನಾತ್ ನೀಡಿದ ಏಕ್ ಹೈ ತೋ ಸೇಫ್ ಹೈ” ರಾಜಕೀಯ ಘೋಷಣೆಯನ್ನು ಆಧರಿಸಿ ಕರ್ನಾಟಕದ ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರು ಅದ್ಭುತವಾದ ಕಾರ್ಟೂನ್ ಅನ್ನು ರಚಿಸಿದ್ದಾರೆ, ಇದು ಇಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ದೇಶದ ಪ್ರಮುಖ ಸರ್ಕಾರಿ ಸಂಸ್ಥೆಗಳಾದ ಮೋದಿ ಸರ್ಕಾರ, ಪೊಲೀಸ್, ಸಿಬಿಐ, ಇಡಿ, ಆದಾಯ ತೆರಿಗೆ, ಸೆಬಿ, ಮಡಿಲ ಮಾಧ್ಯಮಗಳು, ಐಟಿ ಸೆಲ್ ಮತ್ತು ಬಿಜೆಪಿ ಪಕ್ಷ ಒಟ್ಟಾಗಿ ಅದಾನಿಯನ್ನು ಉಳಿಸುವಲ್ಲಿ ನಿರತವಾಗಿವೆ ಎಂಬುದನ್ನು ಅವರು ಕಾರ್ಟೂನ್ನಲ್ಲಿ ಸುಂದರವಾಗಿ ತೋರಿಸಿದ್ದಾರೆ.

ಸತೀಶ್ ಆಚಾರ್ಯ ಅವರು ಕೇವಲ ಒಂದು ಚಿತ್ರದಲ್ಲಿ ನೂರಾರು ಪುಟಗಳ ಚರ್ಚೆ ಮತ್ತು ಆರೋಪಗಳನ್ನು ಒಟ್ಟುಗೂಡಿಸಿದ್ದಾರೆ. ಅವರ ಕಾರ್ಟೂನ್ ಹಾಸ್ಯದ ಪರಿಪೂರ್ಣ ಉದಾಹರಣೆ ಮಾತ್ರವಲ್ಲದೆ ದೇಶದ ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿಗಳ ಬಗ್ಗೆ ಆಳವಾದ ಮತ್ತು ಕಹಿ ಸತ್ಯವನ್ನು ಎತ್ತಿ ತೋರಿಸುತ್ತದೆ.

ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಟೂನ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನ ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಸತೀಶ್ ಆಚಾರ್ಯ ಅವರ ಕಾರ್ಟೂನ್ ಸೃಜನಾತ್ಮಕ ಅಭಿವ್ಯಕ್ತಿಯು ಯಾವುದೇ ಸಂಕೀರ್ಣ ಸಮಸ್ಯೆಯನ್ನು ಸರಳತೆ ಮತ್ತು ಆಳದೊಂದಿಗೆ ಸಾರ್ವಜನಿಕರಿಗೆ ಪ್ರಸ್ತುತಪಡಿಸುತ್ತದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ.

ಎಂ.ಆರ್.ಮಾನ್ವಿ

 


Share: